ಈ ಲೇಖನವನ್ನು ಬರೀ ಡಿಸ್ಕಶನ್ ವಿಷಯವಾಗಿ ಪರಿಗಣಿಸಿ. ಲೇಖಕ, ಫಿಸಿಸಿಸ್ಟ್ ಅಲ್ಲ.
ಬ್ರಹ್ಮಾಂಡ ವಿಸ್ತರಿಸ್ತ ಇದೆ, ಪ್ರತಿ ಕ್ಷಣ. ಇದು ಪ್ರಾರಂಭ ಆದದ್ದು “ಬಿಗ್ ಬ್ಯಾಂಗ್” ಆದಾಗಿನಿಂದ ಅಂತ ವಿಜ್ಞಾನಿಗಳ ಅಭಿಪ್ರಾಯ.
ಸಾಮಾನ್ಯ ಜ್ಞಾನ ಅನ್ನುತದೆ, ಹೀಗೆ ಶುರು ಆದ ಬ್ರಹ್ಮಾಂಡದ ಕೇಂದ್ರ “ಬಿಗ್ ಬ್ಯಾಂಗ್” ಆದ ಜಾಗವೇ ಇರಬಹುದು ಅಂತ. ಆದರೆ ವಿಜ್ಞಾನ ಹೇಳುತ್ತದೆ ನಮ್ಮ ಬ್ರಹ್ಮಾಂಡಕ್ಕೆ ಕೇಂದ್ರ ಬಿಂದುವೇ ಇಲ್ಲವೆಂದು.
ಯಾಕೆ?!!
ಬಿಗ್ ಬ್ಯಾಂಗ್ ಆದ ಮೇಲಿಂದ ಪ್ರತಿಯೊಂದು ಅಣು. ಅಣುವು, ಕಣ ಕಣವು ಒಂದರಿಂದ ಒಂದು ಬೇರೆ ಬೇರೆ ಆಗಬೆಕೆಂಬ ಧೃಡ ನಿಸ್ಚಯವಿದ್ದಂತೆ ಹರಡಿದವು, ಹರಡುತ್ತಲಿವೆ. ಹಾಗಾಗಿ ಸದ್ಯದ ಪರಿಸ್ತಿತಿಯಲ್ಲಿ ಕೇಂದ್ರವಿಲ್ಲದಿರುವುದು ಸಹಜ.
ಆದರೆ ಕೇಂದ್ರವೇ ಇರಲಿಲ್ಲ ಆನ್ನುವ ತತ್ವದ ಹಿನ್ನಲೆ ಏನು?
ಇದು ನಮ್ಮ ಕಲ್ಪನೆಗೆ ಮೀರಿದ ವಿಷಯ. ನಮ್ಮ್ ಕಲ್ಪನೆ ಒಂದು ಕಂಟೇನರ್ ಅತವಾ ಪಾತ್ರೆ ಒಳಗೆ ಇರುವಂತಹದಕ್ಕೆ ಸೀಮಿತ: ಇಲ್ಲಿ ಸುರು ಆಗಿ ಇಲ್ಲಿ ಮುಗಿಯುತ್ತದೆ ಅನ್ನುವುದಕ್ಕೆ ಸೀಮಿತ.”ಆದರೆ “ಬಿಗ್ ಬ್ಯಾಂಗ್” ಆಗಿದ್ದು ಏನಿಂದಲು ಅಲ್ಲ. ಅದಕಿಂತ ಮುಂಚೆ ಏನು ಇರಲಿಲ್ಲ.” ಇದು ವಿಜ್ಞಾನಿಗಳ ಅಭಿಪ್ರಾಯ. ಹಾಗಾಗಿ ಏನು ಇಲ್ಲದ ಆ ಜಾಗ ಯಾವುದು ಎಂದು ಮುಂದಿನ ಪ್ರಶ್ನೆ ನಮ್ಮ ಮನದಲ್ಲಿ ಸಹಜವಾಗಿ ಮೂಡುತ್ತದೆ.
ಏನು ಇಲ್ಲದ ಜಾಗಕ್ಕೆ ಸಮಯವಿರುತ್ತದೆಯೇ? ಏನು ಇಲ್ಲ ಅಂದ ಮೇಲೆ ಶುರು ಮತ್ತೆ ಕೊನೆ ಇರುತ್ತದೆಯೇ.?ಇದು ನಮ್ಮಂತಹ ಸಾಮಾನ್ಯ ಮನುಷ್ಯರ ಕಲ್ಪನಾಶಕ್ತಿಗೆ ಎಟುಕದ ವಿಷಯ.
ನೀವೆಲ್ಲ Mallಗೆ ಹೋಗಿರುತ್ತಿರೀ. ಅಲ್ಲಿ ಬಿಸಿ ಬಿಸಿ ಚಾಕ್ಲೇಟ್ ಒಂದು ಕಾರಂಜಿಯಂತೆ ನಿರಂತರವಾಗಿ ಮೇಲೆ ಉಕ್ಕಿ ಕೆಳಗೆ ಚೆಲ್ಲಿ ಮತ್ತೆ ಮೇಲೆ ಬರುವ ಯಂತ್ರವನ್ನ ನೋಡಿರುತ್ತೀರಿ. ಅಂತ ಕಾರಂಜಿಯಲ್ಲಿ ನಾವು ಒಂದು ಕಣವಾಗಿ ಒಂದು ಪಾಯಿಂಟ್ನಲ್ಲಿ ಇದ್ದರೆ? ನಮಗೆ ಎಲ್ಲರೂ ನಮ್ಮಿಂದ ದೂರ ಹೋಗುತ್ತಿರುವಂತೆ ಬಾಸವಾದೀತು. ಹಾಗಾದರೆ ನಮ್ಮ ಬ್ರಹ್ಮಾಂಡ ಒಂದು ಚಿಮ್ಮುತಿರುವ ಕಾರಂಜಿಯೇ? ತಿಳಿದವರು ಹೇಳಬೇಕು.
ಹಾಗಿದ್ದಲ್ಲಿ ನಾವು ದೂರ ಹೋಗುತ್ತಿಲ್ಲ, ಬರಿ ಉಕ್ಕಿ ಚೆಲ್ಲುತ್ತಾ ಇದ್ದೇವೆ, ನಿರಂತರವಾಗಿ. ಕೊನೆ ಇಲ್ಲ ಮೊದಲು ಇಲ್ಲ.